January 31st, 2018 lunar eclipse in India. Here is the detail of lunar eclipse impact on zodiac signs and rituals should follow on that day. Prediction by well known astrologer Pandit Vittal Bhat.
ಇದೇ ತಿಂಗಳು ಅಂದರೆ ಜನವರಿ 31ರ ಬುಧವಾರದಂದು ಖಂಡಗ್ರಾಸ ಚಂದ್ರಗ್ರಹಣ ಇದ್ದು, ಅಶ್ಲೇಷ ನಕ್ಷತ್ರದಲ್ಲಿ ಚಂದ್ರನಿಗೆ ಪೂರ್ಣ ರಾಹು ಗ್ರಹಣವು ಗ್ರಸ್ತೋದಯವಾಗಿ ಗೋಚರವಾಗುತ್ತದೆ. ಅಂದು ಸಂಜೆ 5.17ಕ್ಕೆ ಗ್ರಹಣದ ಸ್ಪರ್ಶ ಕಾಲ ಆಗಲಿದ್ದು, ರಾತ್ರಿ 7.19ಕ್ಕೆ ಗ್ರಹಣ ಮಧ್ಯಕಾಲವಾಗಲಿದ್ದು, ರಾತ್ರಿ 8.41ಕ್ಕೆ ಗ್ರಹಣ ಮೋಕ್ಷ ಆಗಲಿದೆ.ಈ ಗ್ರಹಣದಿಂದ ಶುಭ, ಮಿಶ್ರ ಹಾಗೂ ಅಶುಭ ಫಲಗಳು ಯಾವ ರಾಶಿಗಳಿಗಿವೆ ಎಂಬುದರ ವಿವರ ಹೀಗಿದೆ.ಶುಭ ಫಲ ಪಡೆಯುವ ರಾಶಿಗಳು: ವೃಷಭ, ತುಲಾ, ಕುಂಭ, ಕನ್ಯಾ. ಮಿಶ್ರ ಫಲ ಪಡೆಯುವ ರಾಶಿಗಳು: ಮೀನ, ಮಿಥುನ, ಮಕರ, ವೃಶ್ಚಿಕ. ಅಶುಭ ಫಲ: ಮೇಷ, ಸಿಂಹ, ಕರ್ಕಾಟಕ, ಧನು.ಇಲ್ಲಿನ ಶುಭಾಶುಭ ಫಲಗಳ ಫಲಿತಾಂಶ ಗ್ರಹಣದ ದಿನದಲ್ಲಿ ಹೆಚ್ಚಿರುತ್ತದೆ. ಆದರೆ ಪರಿಣಾಮ ಹದಿನೈದು- ಇಪ್ಪತ್ತು ದಿನಗಳ ಮೊದಲಿಂದಲೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.